• ವಿಭಾಗದ ಕರಿತು:

  ಸಮಾಜಕಾರ್ಯ ವಿಭಾಗವು ಕರ್ನಾಟಕ ವಿಶ್ವವಿದ್ಯಾಲಯದ ಅದೀನದಲ್ಲಿದ್ದ ಕಿತ್ತೂರು ರಾಣಿ ಚನ್ನಮ್ಮ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬೆಳಗಾವಿಯಲ್ಲಿ 2006 ರಲ್ಲಿ ಪ್ರಾರಂಭವಾಗಿದ್ದು, 2010-11 ನೇ ಶೈಕ್ಷಣಿಕ ಸಾಲಿನಿಂದ ಸ್ವತಂತ್ರವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಉನ್ನತ ಶಿಕ್ಷಣ ನೀಡುವಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಬಂದಿದೆ. 2015 ರಿಂದ ಸಮಾಜಕಾರ್ಯ ವಿಭಾಗದಲ್ಲಿ ಪಿಎಚ್.ಡಿ ಕಾರ್ಯಕ್ರಮವನ್ನೂ ಪ್ರಾರಂಭಿಸಲಾಗಿದೆ. ಸಮಾಜಕಾರ್ಯ ವಿಭಾಗವು ವ್ರತ್ತಿಪರ ಸಮಾಜಕಾರ್ಯದ ಉದಯೋನ್ಮುಖ ಕ್ಷೇತ್ರಗಳಲ್ಲಿ ಬೋಧನೆ, ಕಲಿಕೆ, ಸಂಶೋಧನೆ ಮತ್ತು ಸಮುದಾಯ ಸಂಘಟನೆಯ ವಿಸ್ತರಣಾ ಕಾರ್ಯಗಳ ಮೂಲಕ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಕ್ಷೇಮವನ್ನು ಉತ್ತೇಜಿಸುವದರ ಮೂಲಕ  ಶೈಕ್ಷಣಿಕ ಶ್ರೇಷ್ಟತೆಯ ಕೇಂದ್ರವಾಗಿ ಬೆಳೆಯುವ ಉದ್ದೇಶವನ್ನು ಹೊಂದಿದೆ.

 • ಭೋದಕ ಸಿಬ್ಬಂದಿ

  ಕ್ರಮ ಸಂಖ್ಯೆಬೋದಕ ಸಿಬ್ಬಂದಿಯ ಹೆಸರುಭಾವಚಿತ್ರವಿದ್ಯಾರ್ಹತೆಹುದ್ದೆಸಂಶೋಧನೆ ವಿಷಯಇಮೇಲ್ & ದೂರವಾಣಿ
  01 ಪ್ರೊ. ಅಶೋಕ ಆಂಟನಿ ಡಿಸೋಜಾ

  ಎಮ್.ಎಸ್.ಡಬ್ಲೂ ಎಮ್. ಕಾಮ್ ಎಮ್.ಎ (ತತ್ವಶಾಸ್ತ್ರ) ಪಿಎಚ್.ಡಿ (ಸಮಾಜಕಾರ್ಯ)

  ಪ್ರಾಧ್ಯಾಪಕರು

  ಸಾಮಾಜಿಕ ಕ್ರಿಯೆ ಹಾಗೂ ಸಾಮಾಜಿಕ ಅಭಿವ್ರದ್ಧಿ.

  ashokdsouza2005@gmail.com
  02 ಶ್ರೀ ಸಿದ್ದಲಿಂಗೇಶ್ವರ ಎಸ್ ಬಿದರಳ್ಳಿ

  ಎಮ್ ಎಸ್ ಡಬ್ಲೂ

  ಸಹಾಯಕ ಪ್ರಾಧ್ಯಾಪಕರು

  ಗ್ರಾಮೀಣ ಅಭಿವ್ರದ್ಧಿ ,ಮಾನಸಿಕ ಆರೋಗ್ಯ, ಹಾಗೂ ಮಹಿಳಾ ಸಬಲೀಕರಣ.

  ss_bidaralli@yahoo.co.in
  03 ಶ್ರೀ ಸಂತೋಷ ಎಲ್. ಪಾಟೀಲ್

  ಎಮ್.ಎಸ್.ಡಬ್ಲೂ 

  ಸಹಾಯಕ ಪ್ರಾಧ್ಯಾಪಕರು

  ವ್ರತ್ತಿ ಜೀವನದ ಗುಣಮಟ್ಟ, ಸಾಮಾಜಿಕ ಹೊರಗೊಳಿಸುವಿಕೆ, ಮಾನವ ಸಂಪನ್ಮೂಲ ನಿರ್ವಹಣೆ ಹಾಗೂ ಮಾನವ ಸಂಪನ್ಮೂಲ ಅಭಿವ್ರದ್ಧಿ.

  Santoshpatil639@gmail.com
  04 ಡಾ. ಚಂದ್ರಶೇಖರ ಸಿ. ಬನಸೋಡೆ

  ಎಮ್ ಎಸ್ ಡಬ್ಲೂ,
  ಪಿಎಚ್.ಡಿ (ಸಮಾಜಕಾರ್ಯ)

  ಸಹಾಯಕ ಪ್ರಾಧ್ಯಾಪಕರು

  ಮಹಿಳಾ ಸಬಲೀಕರಣ, ಸ್ಥಳೀಯ ಆಡಳಿತ, ಹಾಗೂ ಗ್ರಾಮೀಣ ಮತ್ತು ಆದಿವಾಸಿ ಅಭಿವ್ರದ್ದಿ.

  chandrashekar.banasode@gmail.com
  05 ಶ್ರೀ ಚಿದಾನಂದ ಯು. ಢವಳೇಶ್ವರ

  ಎಮ್ ಎಸ್ ಡಬ್ಲೂ,
  ಎಮ್ ಪಿಲ್

  ಸಹಾಯಕ ಪ್ರಾಧ್ಯಾಪಕರು

  ಸಾಂಸ್ಥಿಕ ಸಮಾಜಿಕ ಜವಾಬ್ದಾರಿ ಸಾಂಸ್ಥಿಕ ವರ್ತನೆ ಹಾಗೂ ಅಭಿವ್ರದ್ಧಿ, ಸಾಮಾಜಿಕ ಅಭಿವ್ರದ್ಧಿ.

  chidanand.dhavaleshwar@yahoo.com
  06 ಶ್ರೀಮತಿ ದೇವತಾ ಡಿ. ಗಸ್ತಿ ಎಮ್ ಎಸ್ ಡಬ್ಲೂ ಸಹಾಯಕ ಪ್ರಾಧ್ಯಾಪಕರು ವೆದ್ಯಕೀಯ ಮತ್ತು ಮನೋವೆದ್ಯಕೀಯ ಸಮಾಜಕಾರ್ಯ, ಹಾಗೂ ಮಹಿಳಾ ಸಬಲೀಕರಣ. devataps@gmail.com
 • ಸಂಶೋಧನೆ:

  ಭೋದಕ ಸಿಬ್ಬಂದಿಯ ಹೆಸರುಸಂಶೋಧನೆ ವಿವರ
  ಪ್ರೊ. ಅಶೋಕ ಆಂಟನಿ ಡಿಸೋಜಾ

  ವಿಶ್ವವಿದ್ಯಾಲಯ ಅನುದಾನಿತ “ದಲಿತ ಸಬಲೀಕರಣದ ಕಡೆಗೆ ಸರ್ಕಾರೇತರ ಸಂಘಟನೆಗಳ ಪ್ರಯತ್ನಗಳು; ಬೆಳಗಾವಿ ತಾಲೂಕನ್ನು ಅನುಲಕ್ಷಿಸಿ ಒಂದು ಸಮಾಜಕಾರ್ಯ ಅಧ್ಯಯನ” ಎಂಬ ಸಂಶೋಧನಾ ಯೋಜನೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  "ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಕೃಷಿಕರ ಬಿಕ್ಕಟ್ಟನ್ನು ಪರಿಹರಿಸುವಿಕೆ; ಕರ್ನಾಟಕದ ರೈತರು ಎದುರಿಸುವ ಸಂಭಾವ್ಯತೆ ಮತ್ತು ಸವಾಲುಗಳ ಅನುಭವದ ಸಮೀಕ್ಷೆ” ಎಂಬ ಯುಜಿಸಿ ಅನುದಾನಿತ ಸಂಶೋಧನಾ ಯೋಜನೆಯಲ್ಲಿ ಉಪ-ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. "ಕರ್ನಾಟಕದ ದಲಿತ ಮಕ್ಕಳ ನಡುವೆ ಅಪೌಷ್ಟಿಕತೆಗೆ ಕಾರಣೀಭೂತವಾದ ಸಾಮಾಜಿಕ ಅಂಶಗಳ ಅಧ್ಯಯನ" ಎಂಬ ಶೀರ್ಷಿಕೆಯ IಅSSಖ ಅನುದಾನಿತ ಸಂಶೋಧನಾ ಯೋಜನೆಯಲ್ಲಿ ಉಪ-ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ.

  ಶ್ರೀ ಸಂತೋಷ ಎಲ್ ಪಾಟೀಲ್

  "ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ವ್ಯಕ್ತಿಗಳಿಗೆ ಯೋಜನೆಗಳು ಮತ್ತು ಸೇವೆಗಳ ಜ್ಞಾನ ಮತ್ತು ಬಳಕೆ ಕುರಿತು ಬೆಳಗಾವಿ ತಾಲೂಕಿನ ಒಂದು ಅಧ್ಯಯನ” ಎಂಬ ಸಂಶೋಧನಾ ಯೋಜನೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  ಶ್ರೀ ಚಿದಾನಂದ ಯು ಢವಳೇಶ್ವರ

  "ಸಿಎಸ್ಆರ್ ಯೋಜನೆಗಳ ಮೂಲಕ ಕಾರ್ಪೊರೇಟ್ ವಲಯದಿಂದ ಸಮುದಾಯ ಅಭಿವೃದ್ಧಿಯತ್ತ ಕೊಡುಗೆಗಳು: ಬೆಳಗಾವಿ ಜಿಲ್ಲೆಯ ಪುರಾತನ ಬುಡಕಟ್ಟು ಜನಾಂಗ ಅನುಲಕ್ಷಿಸಿ ಒಂದು ಅಧ್ಯಯನ " ಎಂಬ ಸಂಶೋಧನಾ ಯೋಜನೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  ಶ್ರೀಮತಿ ದೇವತಾ ಡಿ ಗಸ್ತಿ

  "ಬಂಬರಗಾ ಗ್ರಾಮದ ಹಿರಿಯ ವ್ಯಕ್ತಿಗಳಲ್ಲಿ ಜೀವನ ತ್ರುಪ್ತಿಯ ಕುರಿತು ಒಂದು ಅಧ್ಯಯನ”. ಎಂಬ ಸಂಶೋಧನಾ ಯೋಜನೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 • ವಿಭಾಗೀಯ ಚಟುವಟಿಕೆಗಳು

  ಚಟುವಟಿಕೆವಿವರ
  “ಸಂಚಲನ ”: ಆಪ್ತಸಮಾಲೋಚನೆ ಹಾಗೂ ಮಾರ್ಗ ದರ್ಶನ ಕೇಂದ್ರ.

  ಆಪ್ತ ಸಮಾಲೋಚನಾ ಕೇಂದ್ರವು ವಿದ್ಯಾರ್ಥಿ ಸಮುದಾಯವು ಎದುರಿಸುವ ಶೈಕ್ಷಣಿಕ ಮತ್ತು ಮಾನಸಿಕ-ಸಾಮಾಜಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಂಚಲನ ಕೇಂದ್ರವನ್ನು ಸ್ಥಾಪಿಸಲಾಗಿದೆ.

  ಸಮ್ಮೇಳನಗಳು / ವಿಚಾರ ಸಂಕಿರಣಗಳು/ ಕಾರ್ಯಾಗಾರ

  "ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ವ್ಯಕ್ತಿಗಳಿಗೆ ಯೋಜನೆಗಳು ಮತ್ತು ಸೇವೆಗಳ ಜ್ಞಾನ ಮತ್ತು ಬಳಕೆ ಕುರಿತು ಬೆಳಗಾವಿ ತಾಲೂಕಿನ ಒಂದು ಅಧ್ಯಯನ” ಎಂಬ ಸಂಶೋಧನಾ ಯೋಜನೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  28 ಫೆಬ್ರುವರಿ 2018 ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಬೆಂಗಳೂರು ಇವರ ಸಹಯೋಗದೊಂದಿಗೆ “ಉನ್ನತ ಶಿಕ್ಷಣವನ್ನು ಒಳಗೊಂಡಂತೆ: ಸವಾಲುಗಳು ಮತ್ತು ದೂರದ್ರಷ್ಟಿ” ಎಂಬ ವಿಷಯದ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು.

  22 ಡಿಸೆಂಬರ್ 2016 ರಂದು ಒಡನಾಡಿ ಸೇವಾ ಮೈಸೂರು, ಸ್ಪಂದನಾ ಬೆಳಗಾವಿ,ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ. ಇವರ ಸಂಯೋಜನೆಯಲ್ಲಿ “ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ, ತಡೆಗಟ್ಟುವಿಕೆ, ರಕ್ಷಣೆ, ಹಾಗೂ ಪುನರ್ವಸತಿ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು

  13 ಮೇ 2016 ರಂದು ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಹಾಗೂ ಇತಿಹಾಸ ವಿಭಾಗಗಳ ಸಂಯೋಗದೊಂದಿಗೆ “ಕರ್ನಾಟಕದಲ್ಲಿ ಸಾಮಾಜಿಕ ಚಳುವಳಿಗಳು: ಬದಲಾವಣೆಗಳು ಮತ್ತು ನಿರಂತರತೆ” ಎಂಬ ವಿಷಯದ ಕುರಿತಾಗಿ ಅಂತರವಿಭಾಗಗಳ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿತ್ತು.

  ಇನ್ನೂ ಹಲವಾರು ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ.

  ವಿಸ್ತರಣಾ ಕಾರ್ಯ ಚಟುವಟಿಕೆಗಳ

  ವಿಭಾಗದಿಂದ ಹಮ್ಮಿಕೊಳ್ಳಲಾದ ಹಲವಾರು ಕಾರ್ಯಕ್ರಮಗಳಲ್ಲಿ ಕೆಲವುಗಳು ಈ ಕೆಳಗಿನಂತಿವೆ:

  5 ಅಕ್ಟೋಬರ್ 2013 ರಂದು ವಂಟಮುರಿ ಗ್ರಾಮದಲ್ಲಿ ಸಮೃದ್ಧಿ ಸೇವಾ ಸಂಸ್ಥೆ ಸಹಯೋಗದೊಂದಿಗೆ ಮಹಿಳಾ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

  24 ನವೆಂಬರ 2013 ರಂದು ಉಕ್ಕಡ ಗ್ರಾಮದಲ್ಲಿ ಸುವರ್ಣ ಜೆಎನ್ಎಂಸಿ ಸಮುದಾಯ ಆರೋಗ್ಯ ಚಟುವಟಿಕೆಗಳು, ಕೆಎಲ್ಇ ಡಾ. ಪ್ರಭಾಕರ್ ಕೋರೆ ಚಾರಿಟಬಲ್ ಆಸ್ಪತ್ರೆ, ಬೆಳಗಾವಿ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

  ಏಪ್ರಿಲ್ 2014 ರಂದು ಕಲ್ಯಾನಟ್ಟಿ ಗ್ರಾಮದಲ್ಲಿ ನೆಹರೂ ಯುವ ಕೇಂದ್ರ, ಬೆಳಗಾವಿ, ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯ, ಬೆಳಗಾವಿ ಇವರ ಸಹಯೋಗದೊಂದಿಗೆ “ಯುಕರ ಸಬಲಿಕರಣಕ್ಕೊಸ್ಕರ ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳು” ಜಾಗ್ರತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

  29 ನವೆಂಬರ್ 2016 ರಂದು ಹೊಸೂರ ಗ್ರಾಮದಲ್ಲಿ “ಸುಸ್ಥಿರ ಕ್ರಷಿ ಆಚರಣೆಗಳು” ಕುರಿತು ಕಾರ್ಯಕ್ರಮವನ್ನು ಡಿಎಸಿ, ಎಆರ್ಎಸ್, ನಿಪ್ಪಾನಿಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

  29 ನವೆಂಬರ್ 2016 ರಂದು ಹೊಸೂರು ಗ್ರಾಮದಲ್ಲಿ ನಿಪ್ಪಾನಿಯ ಕೃಷಿ ಮಹಾವಿದ್ಯಾಯದ ತಾಂತ್ರಿಕ ವಿಜ್ಞಾನ (ಆಹಾರ ಮತ್ತು ಪೌಷ್ಠಿಕಾಂಶ) ಡಾ. ಗೀತಾ ದಂಡಿನ್ ಅವರು "ಪೌಷ್ಟಿಕ ಆಹಾರದ ತಯಾರಿಕೆ ಮತ್ತು ಬಳಕೆ" ಕುರಿತು ವಿಶೇಷ ಉಪನ್ಯಾಸ ನೀಡಿದರು.

  ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರಿಕ್ಷಕರಾದ ಶ್ರೀ ಅನಿಲ್ ಬಗಟೇ ಯವರಿಂದ "ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ಕ್ರಮಗಳು" ಎಂಬ ಕಾರ್ಯಕ್ರಮವನ್ನು ಹೊಸೂರು ಹಳ್ಳಿಯಲ್ಲಿ ಆಯೋಜಿಸಲಾಗಿದೆ. ಮುಂದಿನ 2016 ರಿಂದ ಮೇ 2017 ರ ರವರೆಗೆ ಅನುಸರಣಾ ಕಾರ್ಯವನ್ನು ಕೈಗೊಳ್ಳಲಾಯಿತು.

  7 ಡಿಸೆಂಬರ್ 2016 ರಂದು ವಿಜಯ ಆರ್ಥೋ ಪೀಡಿಯಾಟ್ರಿಕ್ ಆಸ್ಪತ್ರೆ ಬೆಳಗಾವಿ ಇವರ ಸಹಯೋಗದೊಂದಿಗೆ ಗುಗ್ರ್ಯಾನಟ್ಟಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಸಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

  22 ಏಪ್ರೀಲ್ 2017 ರಂದು ಗುಗ್ರ್ಯಾನಟ್ಟಿ ಗ್ರಾಮದಲ್ಲಿ “ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕಾಂಶದ ಮಹತ್ವದ” ಕುರಿತು ಕಾರ್ಯಾಗಾರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ವಂಟಮೂರಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

  30 ಅಕ್ಟೋಬರ 2017 ರಂದು ಶಿವಾಪುರ ಗ್ರಾಮದಲ್ಲಿ ಡಾ. ವಿನಾಯಕ ಕಷ್ಯಪ ಸಾರ್ವಜನಿಕ ಆರೋಗ್ಯ ವಿಭಾಗ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜ್, ಬೆಳಗಾವಿ ಇವರಿಂದ “ಆರೋಗ್ಯ ಸುಧಾರಣೆ ಹಾಗೂ ಸುಚಿತ್ವಕ್ಕೆ ಸರಳ ಮಾರ್ಗೋಪಾಯಗಳ” ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು.

  ಸನ್ಮಾನ್ಯ ಶ್ರೀ ವಜುಬಾಯಿ ವಾಲಾ, ಕರ್ನಾಟಕ ರಾಜ್ಯಪಾಲರು, ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳು ನೀಡಿರುವ ಮಾರ್ಗಸೂಚಿಗಳ ಮೇರೆಗೆ ಸಮಾಜಕಾರ್ಯ ವಿಭಾಗವು ಬಂಬರಗಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು “ಸ್ಮಾರ್ಟ ವಿಲೇಜಸ್” ಗಳನ್ನಾಗಿಸಲು ದತ್ತು ತೆಗೆದುಕೊಳ್ಳಲಾಗಿದೆ. ಹಾಗೂ ಈ ದಿಶೆಯಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

  ಪ್ರಕಟಣೆಗಳು

  “ಮೇಕಿಂಗ್ ಹೈಯರ್ ಎಜುಕೇಷನ್ ಟ್ರೂಲಿ ಇನ್ಕ್ಲೂಸಿವ್: ಚಾಲೆಂಜಸ್ ಅಂಡ್ ಪ್ರಾಸ್ಪೆಕ್ಟ್ಸ್” ಎಂಬ ರಾಷ್ಟ್ರೀಯ ಸಮ್ಮೇಳನದಲ್ಲಿ ಪೀರ್-ರಿವ್ಯೂ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಪತ್ರಿಕೆಗಳನ್ನು ಯುಜಿಸಿ ಮಾನ್ಯತೆ ಪಡೆದ ಅಂತರಾಷ್ಟ್ರೀಯ ಜರ್ನಲ್ "ದಕ್ಷಿಣ ಏಷ್ಯಾದ ಜರ್ನಲ್ ಆಫ್ ಪಾರ್ಟಿಸಿಪೇಟಿವ್ ಡೆವೆಲಪ್ಮೆಂಟ್" (ಐಎಸ್ಎಸ್ಎನ್: 0976 2701)ನಲ್ಲಿ ವಿಶೇಷ ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗಿದೆ.

  ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಕಾರ್ಯಕ್ರಮ

  ವಿದ್ಯಾರ್ಥಿಗಳ ಸಮಗ್ರ ಅಭಿವ್ರದ್ದಿಯನ್ನು ಖಚಿತಪಡಿಸಲು ಈ ವಿಭಾಗವು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮವನ್ನು ವಿನ್ಯಾಸಗೊಳಿಸುತ್ತಿದೆ ಹಾಗೂ ಮೇಲ್ವಿಚಾರಣೆ ಮಾಡುತ್ತಿದೆ.

  “ಅಸ್ಥಿತ್ವ” ಸಮಾಜಕಾರ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘ

  ಹಳೆಯ ವಿದ್ಯಾರ್ಥಿಗಳ ಸಂಘವು ಸಾಮಾಜಿಕ ಅಭಿವ್ರದ್ದಿಗೋಸ್ಕರ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಹಾಗೂ ವಿದ್ಯಾರ್ಥಿಗಳಿಗೆ ಉದ್ದೋಗಾವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತಿದೆ.

  ಪ್ರವಾಸ ಅಧ್ಯಯನ ಮತ್ತು ಪರಿವೀಕ್ಷಣಾ ಭೇಟಿಗಳು

  ವಿದ್ಯಾರ್ಥಿಗಳ ವಿಶೇಷತೆಯನ್ನು ಆಧರಿಸಿ ಒಳ್ಳೆಯ ಸಂಸ್ಥೆಗಳಿಗೆ ಹಾಗೂ ಉತ್ತಮ ಆಚರಣೆಗಳನ್ನು ಹೊಂದಿರುವ ನಗರಗಳಾದ ಪುಣೆ, ಮುಂಬೈ, ಬೆಂಗಳೂರು ಮತ್ತು ಮೈಸೂರು ಇವುಗಳಿಗೆ ಪ್ರವಾಸ ಅಧ್ಯಯನ ಹಾಗೂ ಉತ್ತಮ ಸಂಸ್ಥೆಗಳಿಗೆ ಪರಿವೀಕ್ಷಣಾ ಭೇಟಿಗಳನ್ನು ಆಯೋಜಿಸುತ್ತಾ ಬರಲಾಗಿದೆ.

  ಸಮಾಜಕಾರ್ಯ ಶಿಬಿರಗಳು

  ಪ್ರತಿ ವರ್ಷ 10 ದಿನಗಳ ಸಮಾಜಕಾರ್ಯ ಶಿಬಿರವನ್ನು ವಿವಿಧ ಗ್ರಾಮಗಳ ಸಮಗ್ರ ಅಭಿವ್ರದ್ದಿಗೊಸ್ಕರ ಬೆಳಗಾವಿ, ಖಾನಾಪುರ ಹಾಗೂ ಮುಂಡಗೋಡ ತಾಲೂಕುಗಳಲ್ಲಿ ಆಯೋಜಿಸಲಾಗುತ್ತಿದೆ.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in