ವಿಶ್ವವಿದ್ಯಾಲಯದಕುರಿತು :

ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲ ಯವೆನ್ನುವ ಅಭಿದಾನಕ್ಕೆ ಪಾತ್ರವಾದ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಸ್ಥಾಪನೆಯಾದದ್ದು 2010 ರಲ್ಲಿ ಅದಕ್ಕೂ ಮೊದಲ ಕರ್ನಾಟಕ ವಿಶ್ವವಿದ್ಯಾಲಯದ ಕಿತ್ತೂರುರಾಣಿಚನ್ನಮ್ಮ ಸ್ನಾತಕೋತ್ತರ ಕೇಂದ್ರವಾಗಿ 1982ರಲ್ಲಿ ರೂಪುಗೊಂಡಿತ್ತು. ಉತ್ತರಕರ್ನಾಟಕದ ಉನ್ನತ ಶಿಕ್ಷಣದ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುವ ಸದುದ್ದೇಶದಿಂದ ಆರಂಭವಾದ ಕೇಂದ್ರವು 1994ರಲ್ಲಿ ಭೂತರಾಮನಹಟ್ಟಿಯ 172 ಎಕರೆ ಪ್ರದೇಶದಲ್ಲಿ ತನ್ನ ಭೌತಿಕ ಅಸ್ತಿತ್ವವನ್ನು ಪಡೆದುಕೊಂಡಿತು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಬಳಿಯಲ್ಲಿ ಬೆಳಗಾವಿಯಿಂದ 18 ಕಿ.ಮೀ ಅಂತರದಲ್ಲಿ ನಿಸರ್ಗದ ಮಡಿಲಲ್ಲಿ ವಿಶ್ವವಿದ್ಯಾಲಯವು ನೆಲೆಯೂರಿದೆ. 2010ರಲ್ಲಿ ಕರ್ನಾಟಕರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿರಿಸಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರಕೇಂದ್ರವನ್ನು ಸ್ವತಂತ್ರ ವಿಶ್ವವಿದ್ಯಾಲಯವನ್ನಾಗಿ ಘೋಷಿಸಿತು. ಬೆಳಗಾವಿ,ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಕರ್ನಾಟಕದ ಅತಿ ಮಹತ್ವದ ಹಾಗೂ ಬಹುದೊಡ್ಡ ವಿಶ್ವವಿದ್ಯಾಲಯ ವಾಗಿ ಇಂದು ರೂಪುಪಡೆದುಕೊಂಡಿತು.

abtuni

ಶೈಕ್ಷಣಿಕ ಕಾರ್ಯಕ್ರಮಗಳು  :

ಪ್ರಸ್ತುತ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಒಂಬತ್ತು ನಿಕಾಯಗಳನ್ನು ಹೊಂದಿದ್ದು, ಅದರಅಡಿಯಲ್ಲಿ ಹತ್ತೊಂಬತ್ತು ಸ್ನಾತಕೋತ್ತರ ವಿಭಾಗಗಳು ನಡೆಯುತ್ತಿವೆ. ಸ್ನಾತಕೋತ್ತರ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮಾ ಅಧ್ಯಯನ ಮತ್ತು ಪಿಎಚ್.ಡಿ ಅಧ್ಯಯನ ಕೋರ್ಸಗಳು ನಡೆಯುತ್ತಿವೆ. ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗಗಳು ತಮ್ಮನ್ನು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡಿವೆ. ಯೋಜನಾ ಬದ್ಧ ಹಾಗೂ ಶಿಸ್ತು ಬದ್ಧ ಶೈಕ್ಷಣಿಕ ವ್ಯವಸ್ಥೆ,ಅತ್ಯುತ್ತಮ ಆಡಳಿತಾತ್ಮಕ ಉಪಕ್ರಮಗಳು, ಸಮರ್ಥಗ್ರಂಥಾಲಯ ಹಾಗೂ ಸುಸಜ್ಜಿತ ಪ್ರಯೋಗಾಲಯಗಳು ಅಲ್ಲದೇ ಮಾಹಿತಿತಂತ್ರಜ್ಞಾನದ ಬಗೆಗಿನ ಉನ್ನತಾಧ್ಯಯನಗಳಿಗೆ ಅಗತ್ಯವಿರುವ ಪ್ರಯೋಗಾಲಯಗಳನ್ನು ವಿಶ್ವವಿದ್ಯಾಲಯವು ಹೊಂದಿದೆ. ಜಾಗತೀಕರಣೋತ್ತರ ಸಂದರ್ಭಕ್ಕೆ ಅಗತ್ಯ ವಿರುವ ಅತ್ಯಾಧುನಿಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿ ಸ್ನೇಹಿ ಪರಿಸರವನ್ನು ಆವರಣದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳು ಹಾಗೂ ವ್ಯವಸ್ಥಿತ ಸಾರಿಗೆ ಸಂಪರ್ಕವನ್ನು ಹೊಂದಲಾಗಿದೆ ಮೂಲಭೂತ ಸೌಕರ್ಯಗಳನ್ನು ಅಲ್ಲದೇ ಉಚಿತ ವೈ-ಫೈ (ಇಂಟರನೆಟ್) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆವರಣದಲ್ಲಿ ಬ್ಯಾಂಕ್, ಅಂಚೆಕಛೇರಿ, ಸೈಬರ್‍ಕೆಫೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗಾಗಿ ಕಲ್ಪಿಸಿಕೊಡಲಾಗಿದೆ.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in